ವಿದ್ಯಾರ್ಥಿ ವೇತನಗಳು :ಅರ್ಹ ವಿದ್ಯಾರ್ಥಿನಿಯರೊಂದಿಗೆ ಈ ಕೆಳಕಂಡ ರೀತಿಯಲ್ಲಿ ವಿದ್ಯಾರ್ಥಿ ವೇತನ ಸೌಲಭ್ಯಗಳು ದೊರೆಯಲಿವೆ.
- ಭಾರತ ಸರ್ಕಾರ ವಿದ್ಯಾರ್ಥಿ ವೇತನ (ಪ. ಜಾತಿ, ಪ.ಪಂ. ವಿದ್ಯಾರ್ಥಿನಿಯರಿಗೆ)
- ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ.
- (ವಾರ್ಷಿಕ ಆದಾಯ 44000 ಕ್ಕಿಂತ ಕೆಡಿಮೆ ಇರಬೇಕು )
- ಸರ್ಕಾರದ ಆದೇಶದಂತೆ ಶುಲ್ಕ ವಿನಾಯ್ತಿ.
- ವಿಕಲಚೇತನರಿಗೆ ವಿಯಾರ್ಥಿ ವೇತನ.
- ಅತಿ ಹೆಚ್ಚು ಅಂಕ ಗಳಿಸಿದವರಿಗೆ ವಿದ್ಯಾರ್ಥಿ ವೇತನ
- ಸಂಚಿ ಹೊನ್ನಮ್ಮ ವಿದ್ಯಾರ್ಥಿ ವೇತನ
- ಸ್ಥಳೀಯ ಸರ್ಕಾರಗಳ ವಿದ್ಯಾರ್ಥಿ ವೇತನ.
- ಸಂಘ ಸಂಸ್ಥೆಗಳು ಇತರೆ
ಗ್ರಂಥಾಲಯ :
ನಮ್ಮ ಕಾಲೇಜಿನಲ್ಲಿ 12660 ಗ್ರಂಥಾಲಯದ ಪುಸ್ತಕಗಳಿದ್ದು ಎಲ್ಲವನ್ನೂಗಂಣಕೀಕರಣಗೊಳಿಸಿ ಪುಸ್ತಕಗಳ ವಿತರಣೆ ಮಾಡುತಿದ್ದು 15 ದಿನಕ್ಕೊಮ್ಮೆ ಹಿಂಪಡೆಯುವ /ನವೀಕರಣ ಗೊಳಿಸುವ
ವ್ಯವಸ್ಥೆ ಇದೆ
ರಾಷ್ಟ್ರೀಯ ಸೇವಾ ಯೋಜನೆ :
ನಮ್ಮ ಕಾಲೇಜಿನಲ್ಲಿ 100 ಜನ ವಿದ್ಯಾರ್ಥಿನಿಯರನ್ನೊಳಗೊಂಡ ರಾಷ್ಟ್ರೀಯ ಸೇವಾ ಯೋಜನಾ ಘಟಕವಿದ್ದು,
ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದು ಇದರ ಜೊತೆಯಲ್ಲಿ ರೆಡ್ ರಿಬ್ಬನ್ ಕ್ಲಬ್ ನಚಟುವಟಿಕೆಗಳಲ್ಲಿ ಕೈ ಜೋಡಿಸಿದೆ
ಸ್ಕೌಟ್ಸ್ ಅಂಡ್ ಗೈಡ್ಸ್ :
(ವಿದ್ಯಾರ್ಥಿನಿಯರಿಗಾಗಿ ) ಪ್ರಗತಿಯಲ್ಲಿದೆ
ಕ್ರೀಡೆ :
ನಮ್ಮ ಕಾಲೇಜಿನಲ್ಲಿ ಕ್ರೀಡಾ ವಿಭಾಗವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತಿದ್ದು .
ವಿಶ್ವ ವಿದ್ಯಾಲಯ ಮಟ್ಟದವರೆಗೂ ವಿವಿಧ ಕ್ರೀಡೆಗಳಲ್ಲಿ ನಮ್ಮ ವಿದ್ಯಾರ್ಥಿನಿಯರು ಭಾಗವಹಿಸಿರುತ್ತಾರೆ
ಗ್ರಾಮೀಣ ಪ್ರದೇಶಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದಲೇ ಬಸ್ ಪಾಸ್ಮಾಡಿಸಿಕೊಡುವ ವ್ಯವಸ್ಥೆ ಇದೆ.
ಸಾಂಸ್ಕೃತಿಕ ಚಟುವಟಿಕೆಗಳು :
ವಿದ್ಯಾರ್ಥಿನಿಯರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳು ಹೊರತೆಗೆಯಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಹಮ್ಮಿಕೂಳ್ಳಲಾಗುತ್ತಿದೆ.
ಹೆರಿಟೇಜ್ ಕ್ಲಬ್ (ಐತಿಹಾಸಿಕ ಪರಂಪರಾ ವಿಭಾಗ ) :
ಭಾರತೀಯ ಐತಿಹಾಸಿಕ ಪರಂಪರೆಯನ್ನು ಅರ್ಥೇಸುವ ಹಿನ್ನೆಲೆಯಲ್ಲಿ ಈ ಘಟಕವು ಕಾರ್ಯೋನ್ಮುಕವಾಗಿಐತಿಹಾಸಿಕ ಸ್ಥಳಗಳು, ಕಲೆ, ವಾಸ್ತು ಶಿಲ್ಪ ಕೇಂದ್ರಗಳು, ಐತಿಹಾಸಿಕ ಮಹಾಪುರುಷರು ಜೀವನ ಚರಿತ್ರೆ ಮತ್ತು
ಸಂಸ್ಕೃತಿಯ ಪರಿಚಯ ಮಾಡಲಾಗುತ್ಹಿದೆ.
ಗಣಕ ಪ್ರಯೋಗಾಲಯ :
ಕಾಲೇಜಿನಲ್ಲಿ ಸುಸಜ್ಜಿತವಾದ ವಾತಾನುಕೂಲಿತ ಪ್ರಯೋಗಾಲಯವಿದ್ದು ಇದರಲ್ಲಿ ವ್ಯವಸ್ಥಿತವಾದ ಗಣಕ ಯಂತ್ರಗಳಿದ್ದು ಅಂತರ್ಜಾಲ ವ್ಯವಸ್ಥೆ ಇರುತ್ತದೆ.
ಇತರೆ ಸೌಲಭ್ಯಗಳು (ದೂರನೋಟಕ್ಕೆ)
- ಎಲ್.ಇ.ಡಿ. ವ್ಯವಸ್ಥೆ ಇದೆ..
- ಆಂಗ್ಲ ಭಾಷಾ ಕಲಿಕಾ ಕೌಶಲದ ತರಬೇತಿ ವ್ಯವಸ್ಥೆ ಇದೆ..
- ಸಾಮಾಜಿಕ ವ್ಯಕ್ತಿತ್ವ ರೂಪಿಸುವ ತರಬೇತಿ ಇದೆ.
- ಭೋದಕರ ವೃತ್ತಿ ತರಬೇತಿ ಮಾರ್ಗದರ್ಶನಕ್ಕೆ ವ್ಯವಸ್ಥೆ ಇದೆ.
- ಹಳೆ ವಿದ್ಯಾರ್ಥಿಗಳ ಸಂಘದಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ..
- ಆರೋಗ್ಯ ಕೇಂದ್ರವಿದ್ದು ಆಪ್ತ ಸಮಾಲೋಚನೆಗೆ ಅವಕಾಶವಿದೆ.